ಎಲೆಚುಕ್ಕಿ ರೋಗ : ಅಡಿಕೆ ತೋಟದಲ್ಲಿ ಎಲೆಚುಕ್ಕಿ ರೋಗ YELE CHUKKI
ಮಲೆನಾಡಿನ ಜನರ ಜೀವನಕ್ಕೆ ಕಾರಣವಾಗಿರುವ ಮುಖ್ಯ ಬೆಳೆ ಅಡಿಕೆ. ಅಡಿಕೆ ಬೆಳೆ ಈಗಾಗಲೇ ಹಳದಿ ಎಲೆ ರೋಗ, ತುಂಡೆ ರೋಗ,ಬೇರುಹುಳ ಹೀಗೆ ಹಲವು ರೋಗಗಳಿಂದ ಕ್ಷೀಣಿಸುತ ಬಂದಿದೆ. ಈ ರೋಗಗಳಿಗೆ ಇನ್ನೂ ಪರಿಹಾರ ಸಿಗದೇ ಮಲೆನಾಡಿನ ರೈತರು ಆತಂಕದಲ್ಲಿರುವಾಗಲೆ ಅಡಿಕೆ ತೋಟದಲ್ಲಿ ಮತ್ತೊಂದು ರೋಗ ವೇಗವಾಗಿ ಹರಡುತ್ತಿದೆ. ಹೌದು, ಆ ರೋಗವೆ ಎಲೆ ಚುಕ್ಕಿ ರೋಗ. ಎಲೆಚುಕ್ಕಿ ರೋಗ ಹೊಸ ರೋಗವೇನಲ್ಲ. ಆದರೆ ಈಗ ಮಲೆನಾಡಿನ ಅಡಿಕೆ ತೋಟದಲ್ಲಿ ಈ ರೋಗ ಹರಡುತ್ತಿರುವ ವೇಗ ಕಂಡು ಮಲೆನಾಡಿನ ರೈತರು ಆತಂಕಕ್ಕೆ ಒಳಗಾಗಿದ್ದಾರೆ.ಈ ರೋಗವುಹೆಚ್ಚಾಗಿ ಚಿಕ್ಕ ಸಸಿಗಳು ಹಾಗೂ ಆಗ ತಾನೇ ಫಸಲು ಬಿಡುತ್ತಿರವ ಸಸಿಗಳು ತುತ್ತಾಗುತ್ತದೆ. ಎಲೆಚುಕ್ಕಿ ರೋಗ ಈಗಾಗಲೇ ಕರಾವಳಿ ಭಾಗಗಳದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಗೂ ಮಲೆನಾಡಿನ ಭಾಗಗಳದ ಶೃಂಗೇರಿ. ಕೊಪ್ಪ, ತೀರ್ಥಹಳ್ಳಿ, ಸಾಗರ, ಶಿವಮೊಗ್ಗಗಳಲ್ಲಿ ಅತ್ಯಂತ ವೇಗವಾಗಿ ಹರಡಿ ಸಾವಿರಾರು ಹೆಕ್ಟೇರ್ ಅಡಿಕೆ ತೋಟವನ್ನು ವ್ಯಾಪಿಸಿದೆ.
ರೋಗಕ್ಕೆ ಕಾರಣ:
ಎಲೆಚುಕ್ಕಿ ರೋಗವು ಒಂದು ಶಿಲೀಂಧ್ರ(fungus)ನಿಂದ ಉಂಟಾಗುತ್ತದೆ. ಕೊಲೆಟೋಟ್ರೈಕಮ್(Colletotrichum) ಎಂಬ ಶಿಲೀಂಧ್ರದಿಂದ ಈ ರೋಗ ಉಂಟಾಗುತ್ತದೆ. ಈ ಶಿಲೀಂಧ್ರವು ಹೆಚ್ಚು ಮಳೆ ಬೀಳುವ ಅರಣ್ಯ ಪ್ರದೇಶದಲ್ಲಿ ಬೆಳೆಯುತ್ತದೆ. ಮಲೆನಾಡಿನಲ್ಲಿ ಹೆಚ್ಚು ಮಳೆಯಾಗುವ ಕಾರಣದಿಂದ ಈ ಪ್ರದೇಶದಲ್ಲಿ ಎಲೆಚುಕ್ಕಿ ರೋಗ ಅತ್ಯಂತ ವೇಗವಾಗಿ ಹರಡುತ್ತಿದೆ.
ರೋಗದ ಲಕ್ಷಣಗಳು:
ಎಲೆಚುಕ್ಕಿ ರೋಗಕ್ಕೆ ಹೆಚ್ಚಾಗಿ ಚಿಕ್ಕ ಸಸಿಗಳು ಹಾಗೂ ಆಗ ತಾನೇ ಫಸಲು ಬಿಡುತ್ತಿರವ ಸಸಿಗಳು ತುತ್ತಾಗುತ್ತದೆ.
ಮೊದಲ ಹಂತದಲ್ಲಿ ಅಡಿಕೆ ಸಸಿಯ ಎಲೆಗಳ ಮೇಲೆ ಚುಕ್ಕಿ ಬೀಳುತ್ತದೆ ನಂತರ ಆ ಹೆಡಲು ಸಂಪೂರ್ಣವಾಗಿ ಹಳದಿ ಬಣ್ಣಕ್ಕೆ ತಿರುಗಿ ಬಾಡಿಹೋಗುತ್ತದೆ. ಹೀಗೆ ಒಂದಾದ ಮೇಲೆ ಒಂದರಂತೆ ಎಲ್ಲ ಹೆಡಲುಗಳಿಗು ಹಬ್ಬುತ್ತದೆ. ನಂತರ ಮರವು ಸತ್ತು ಹೋಗುತ್ತದೆ. ಇದು ಮರದಿಂದ ಮರಕ್ಕೆ ವೇಗವಾಗಿ ಹರಡುತ್ತದೆ.
ಈ ರೋಗವನ್ನು ನಿಯಂತ್ರಣ ಮಾಡುವುದು ಹೇಗೆ (ಪರಿಹಾರ) :
ಈಗಾಗಲೇ ರೋಗಕ್ಕೆ ತುತ್ತಾಗಿರುವ ತೋಟಕ್ಕೆ 1 drum ನೀರಿಗೆ 1/2kg ಪೊಂಪ್ಯಾನಿಯಂ(pompanian) ಹಾಗೂ 1/2ltr ಮೋನೊ ಕ್ರೋಟೊಫಸ್(Mono crotophous) ಮಿಶ್ರಣ ಮಾಡಿ ಸಿಂಪಡಣೆ ಮಾಡಿ ಅಥವ ಪ್ರತಿ 1 ltr ನೀರಿಗೆ 2.5gram ಮ್ಯಾಂಕೊಜೆಬ್ ಅಥವ 1ltr ನೀರಿಗೆ 2.5gram ಮ್ಯಾಂಕೊಜೆಬ್ + ಕಾರ್ಬನ್ ಡೈಜಿಮ್ ಅಥವ 1 ltr ನೀರಿಗೆ 1ml ಪ್ರಾಪಿಕಾನ್ ಜೋಲ್ ಅಥವಾ ಒಂದು 1ltr ನೀರಿಗೆ 1ml ಹೆಗ್ಡಾಕಾನ್ ಜೋಲ್ ಮಿಶ್ರಣ ಮಾಡಿ ಸಿಂಪಡಣೆ ಮಾಡಿ. ಹಾಗು ಅತಿಯಾದ ಮಳೆ, ತೇವಾಂಶದಿಂದ ಈ ರೋಗ ಅತ್ಯಂತ ವೇಗವಾಗಿ ಹರಡುತ್ತಿದೆ.ಮಳೆ ಕಡಿಮೆಯಾದ ನಂತರ ಇದು ತಾನಾಗಿಯೇ ಕಡಿಮೆಯಾಗುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.
Comments
Post a Comment