Rain water harvesting in Malenadu ( ಮಳೆನೀರು ಕೊಯ್ಲು)
ಕಳೆದ ೨-೩ ವಾರಗಳಿಂದ ಮಲೆನಾಡಿನಾದ್ಯಂತ ಉತ್ತಮ ಮಳೆಯಾಗುತ್ತಿದೆ, ಅಗಣಿತ ಪ್ರಮಾಣದ ನೀರು ಮಲೆನಾಡನ್ನು ತೊಯುತ್ತಿದೆ, ಹೊಳೆ ಹಳ್ಳಗಳು ಪಾತ್ರ ಮೀರಿ ಉಕ್ಕಿ ಹರಿಯುತ್ತಿವೆ. ಆದರೆ ಇದೇ ಮಲೆನಾಡು ಕಳೆದ ಕೆಲವು ವರ್ಷಗಳಿಂದ ಬೇಸಿಗೆಯಲ್ಲಿ ನೀರಿನ ಅಭಾವ ಎದುರಿಸುತ್ತಿದೆ. ದಕ್ಷಿಣಭಾರತದಲ್ಲಿಯೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳನ್ನು ತನ್ನ ಒಡಲೊಳಗೆ ಹೊಂದಿರುವ 'ಮಳೆಯ ನಾಡು' ಮಲೆನಾಡು ಬಯಲುಸೀಮೆಗಳಂತೆ ಬೇಸಿಗೆಯಲ್ಲಿ ನೀರಿನ ಅಭಾವ ಎದುರಿಸುತ್ತಿದೆ. ಮೊದಲೆಲ್ಲ ತನ್ನ ಮೇಲ್ಪದರದಲ್ಲೇ ಜಲನಿಧಿಯನ್ನು ಕೊಡುತ್ತಿದ್ದ ಮಲೆನಾಡು ಇಂದು ನೂರಾರು ಅಡಿ ಒಡಲು ಬಗೆದರೂ ನೀರಿನ ಪಸೆಯನ್ನೂ ನೀಡದೆ ಪ್ರತಿ ಮಲೆನಾಡಿಗನನ್ನೂ ಚಿಂತೆಗೀಡು ಮಾಡಿದೆ. ಹಾಗಾದರೆ ಈ ಸ್ಥಿತಿಗೆ ಕಾರಣವೇನು, ಪರಿಹಾರಗಳೇನು? ಭೂಮಿಯ ಒಡಲು ಬಗೆದರೂ ನೀರಿನ ಸುಳಿವು ಸಿಗುವುದು ಕಷ್ಟವಾಗಿದೆ ಎಂದರೆ ಅದು ಭೂಮಿಯ ಒಡಲು ಬರಿದಾಗುತ್ತಿದೆ, ಅಂತರ್ಜಲ ಮಟ್ಟ ಇಳಿಕೆಯಾಗಿದೆ ಎಂಬುದರೆ ಸೂಚನೆ. ಈ ಸೂಚನೆಯನ್ನು ಪ್ರಾರಂಭದಲ್ಲಿಯೇ ಗ್ರಹಿಸಿ ಪರಿಹಾರ ಮಾರ್ಗ ಕಂಡುಕೊಳ್ಳದೆ ಹೋದರೆ ಮಲೆನಾಡು, ಮಲೆನಾಡಿಗ ಇಬ್ಬರೂ ತೊಂದರೆ ಅನುಭವಿಸಬೇಕಾಗುತ್ತದೆ. ಪರಿಹಾರಗಳೇನು? ಬರಿದಾಗುತ್ತಿರುವ ಭೂಮಿಯ ಒಡಲನ್ನು ಇನ್ನಷ್ಟು ಬರಿದಾಗದಂತೆ, ಕಲ್ಮಶಗೊಳ್ಳದಂತೆ ತಡೆದು ಅದನ್ನು ಮತ್ತೆ ಜಲನಿಧಿಯಿಂದ ತುಂಬುವಂತೆ ಮಾಡುವುದು ನಮ್ಮ ಮುಂದಿರುವ ಸೂಕ...